- Get link
- X
- Other Apps
- Get link
- X
- Other Apps
ಕಾಸರಗೋಡು ಮೆಡಿಕಲ್ ಕಾಲೇಜಿಗೆ KPSTA ಕುಂಬಳ ಉಪಜಿಲ್ಲಾ ವತಿಯಿಂದ ಜೀವರಕ್ಷ ಮೆಡಿಸಿನ್ ಕಿಟ್ ಹಸ್ತಾಂತರ
ಬದಿಯಡ್ಕ: ಕೇರಳ ಪ್ರದೇಶ ಸ್ಕೂಲ್ ಟೀಚರ್ಸ್ ಅಸೋಸಿಯೇಷನ್ ವತಿಯಿಂದ ಗುರು ಸ್ಪರ್ಶ_ 2 ಕಾರುಣ್ಯ ಚಟುವಟಿಕೆಯ ಭಾಗವಾಗಿ ಕುಂಬಳೆ ಉಪಜಿಲ್ಲಾ ವತಿಯಿಂದ ಉಕ್ಕಿನಡ್ಕ ಮೆಡಿಕಲ್ ಕಾಲೇಜುಗೆ ಜೀವ ಸುರಕ್ಷಾ ಮೆಡಿಸಿನ್ ಕಿಟ್ ನ್ನು ಕಾಸರಗೋಡು ಗೌರವಾನ್ವಿತ ಸಂಸದ ರಾಜ್ ಮೋಹನ್ ಉನ್ನಿತನ್ ಮೆಡಿಕಲ್ ಕಾಲೇಜ್ ಸುಪರಿಡೆಂಟ್ ಗೆ ಹಸ್ತಾಂತರಿಸಿ ಉದ್ಘಾಟಿಸಿದರು.ಕುಂಬಳೆ ಉಪಜಿಲ್ಲಾ ಅಧ್ಯಕ್ಷೆ ಶ್ರೀಮತಿ ಜಲಜಾಕ್ಷಿ ಟೀಚರ್ ಅಧ್ಯಕ್ಷತೆ ವಹಿಸಿದ್ದರು, ಡಿಸಿಸಿ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಜೆಎಸ್,kpsta ರಾಜ್ಯ ಸಮಿತಿ ಸದಸ್ಯ ಯೂಸುಫ್ ಮಾಸ್ಟರ್, ಜಿಲ್ಲಾ ಕೋಶಧಿಕಾರಿ ಪ್ರಶಾಂತ್ ಕಾನತ್ತೂರು, ವಿದ್ಯಾಭ್ಯಾಸ ಜಿಲ್ಲಾ ಕೋಶಧಿಕಾರಿ ಗೋಪಾಲಕೃಷ್ಣನ್, ಬದಿಯಡ್ಕ ಮಂಡಲ ಅಧ್ಯಕ್ಷ ಎನ್ ನಾರಾಯಣನ್,ಪಂಚಾಯತ್ ಉಪಾಧ್ಯಕ್ಷ ಅಬ್ಬಾಸ್ ಎಮ್,ಮಾಜಿ ಅಧ್ಯಕ್ಷ ಮಾಹೀನ್ ಕೆಳೊಟ್,ಕೃಷ್ಣನ್ ಸಿಪಿಕೆ, ಶರತ್ ಚಂದ್ರ ಶೆಟ್ಟಿ, ಮಾತನಾಡಿದರು, ಕುಂಬಳೆ ಉಪಜಿಲ್ಲಾ ಕಾರ್ಯದರ್ಶಿ ರಾಧಾಕೃಷ್ಣ ಸ್ವಾಗತಿಸಿದರು, ಕೋಶಧಿಕಾರಿ ನಿರಂಜನ್ ರೈ ಪೆರಡಾಲ ವಂದಿಸಿದರು, ಮುಂದಿನ ಹಂತವಾಗಿ ಕುಂಬಳೆ ಉಪಜಿಲ್ಲಾ ಪಂಚಾಯತಿನ ಆರೋಗ್ಯ ಕೇಂದ್ರಗಳಿಗೆ ಮಡಿಕಲ್ ಕಿಟ್ ಹಸ್ತಾಂತರಿಸಲು ತೀರ್ಮಾನಿಸಲಾಯಿತು
- Get link
- X
- Other Apps
Comments
Post a Comment