ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 650 ಮಂದಿಗೆ ಕೋವಿಡ್ ಪಾಸಿಟಿವ್ : 928 ಮಂದಿಗೆ ಕೋವಿಡ್ ನೆಗೆಟಿವ್

ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 650 ಮಂದಿಗೆ ಕೋವಿಡ್ ಪಾಸಿಟಿವ್ : 928 ಮಂದಿಗೆ ಕೋವಿಡ್ ನೆಗೆಟಿವ್ 

ಕಾಸರಗೋಡು, ಮೇ 21: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 650 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 928 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾದಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

               FOX24LIVENEWSCHANNEL
                          ನಿಗಾ                             ಕಾಸರಗೋಡು ಜಿಲ್ಲೆಯಲ್ಲಿ 32524 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 31523 ಮಂದಿ ಮನೆಗಳಲ್ಲಿ, ಸಾಮಸ್ಥಿಕವಾಗಿ 1001 ಮಂದಿ ನಿಗಾದಲ್ಲಿರುವರು. ನೂತನವಾಗಿ 1610 ಮಂದಿ ನಿಗಾ ಪ್ರವೇಶಿಸಿದ್ದಾರೆ. 1179 ಮಂದಿ ಶುಕ್ರವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ನೂತನವಾಗಿ 3321 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1215 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 
                        ಒಟ್ಟು ಗಣನೆ 
                          ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 66322 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈ ವರೆಗೆ ಒಟ್ಟು 56941 ಮಂದಿ ಕೋವಿಡ್ ನೆಗೆಟಿವ್ ಆಗಿದೆ. ಸದ್ರಿ 8907 ಮಂದಿ ಕೋವಿಡ್ ಚಿಕಿತ್ಸೆಯಲ್ಲಿದ್ದಾರೆ. ಟೆಸ್ಟ್ ಪಾಸಿಟಿವಿಟಿ ರೇಟ್ 17.2 ಆಗಿದೆ. 

Comments