- Get link
- X
- Other Apps
- Get link
- X
- Other Apps
ಕೇರಳ ಮರಾಟಿ ಸಂರಕ್ಷಣಾ ಸಮಿತಿಯಿಂದ ಕುಂಬ್ಡಾಜೆ ಪಂಚಾಯತ್ ನ ಪಿಳ್ಳಂಕಟ್ಟೆ ನಿರ್ಮಾಣ ವಾಗಲಿರುವ ಮರಾಟಿ ಗರ ಪದ್ಧತಿಯಾದ ಮಹಮ್ಮಾಯಿ ಮಂದಿರ (ಸಮಾಜ ಭವನದ ) ಶಿಲಾನ್ಯಾಸವು ಮಾರ್ಚ್ ತಿಂಗಳ 10 ರಂದು 9.40 ಮತ್ತು 10.30 ರ ಶುಭ ಮುಹೂರ್ತ ದಲ್ಲಿ ಎಡನೀರು ಮಠಾಧೀಶರಾದ ಶ್ರೀ ಶ್ರೀ ಶ್ರೀ
ಸಚಿದಾನಂದ ಭಾರತೀ ಸ್ವಾಮೀಜಿ ಯವರ ದಿವ್ಯ ಹಸ್ತದಿಂದ ಶಿಲಾನ್ಯಾಸ (ಭೂಮಿ ಪೂಜೆ ) ಗೊಳ್ಳಲಿದೆ. ಕಾಮಗಾರಿ ನಿರ್ವಹಣಾ ಇಂಜಿನಿಯರ್ ಶ್ರೀ ರಾಜೇಶ್ ಮಜೆಕ್ಕಾರರ ಉಪಸ್ಥಿಯಲ್ಲಿ ಶಿಲ್ಪಿ ಶ್ರೀ ಸುಕುಮಾರನ್ ಚಾಲಿನ್ಗಲ್ ನೂತನ ಕಟ್ಟಡಕ್ಕೆ ಕುತ್ತಿ ಹಾಕಲಿದ್ದಾರೆ. ಈ ಸಂದರ್ಭದಲ್ಲಿ ಸಮಾಜ ದ ಹಿರಿಯಯ ರಾದ ಶ್ರೀ ಬಾಲಕೃಷ್ಣ ನಾಯ್ಕ್ ಕಯ್ಯಾರ್, ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪ್ರಶಸ್ತಿ ಪುರಸ್ಕೃತ ಅಡಿಷನಲ್ ಎಸ್ಪಿ ಶ್ರೀ ಹರಿಶ್ಚಂದ್ರ ನಾಯ್ಕ್, ಶ್ರೀ ಡಾಕ್ಟರ್ ನಾರಾಯಣ ನಾಯ್ಕ್, ಶ್ರೀ ಡಾಕ್ಟರ್ ಜನಾರ್ಧನ ನಾಯ್ಕ್, ಮಂಜುನಾಥ್ ನಾಯ್ಕ್ ( ಕರ್ನಾಟಕ ) ಮಹೇಶ್ ಶೃಂಗೇರಿ, ಶ್ರೀ ಸುಬ್ರಾಯ ನಾಯ್ಕ್ (ಕೇರಳ ಕರ್ನಾಟಕ ಮರಾಟಿ ಫೆಡರೇಷನ್ ಅಧ್ಯಕ್ಷರು ) ರಾಜ್ಯಾಧ್ಯಕ್ಷರಾದ ಶ್ರೀ ಶ್ಯಾಮ್ ಪ್ರಸಾದ್ ಮಾನ್ಯ, ಕಾರ್ಯದರ್ಶಿ ಪುಟ್ಟ ನಾಯ್ಕ್, ಕೋಶಾಧಿಕಾರಿ ರಾಧಾಕೃಷ್ಣ ಪೈಕ, ಯೂತ್ ವಿಂಗ್ ನ ರಾಧಾಕೃಷ್ಣ ಮಾಸ್ಟರ್, ವಿದ್ಯಾರ್ಥಿ ಸಂಘಟನೆಯ ಮಮತೇಶ್, ಕುಂಬಡಾಜೆ ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಶ್ರೀ ಕೃಷ್ಣ ನಾಯ್ಕ್ ಬೆಳ್ಳಿಗೆ ಉಪಸ್ಥಿತಲಿರುವರು. ಈ ಸಂದರ್ಭದಲ್ಲಿ ವಿವಿಧ ಪಂಚಾಯತ್ ಪ್ರತಿನಿಧಿಗಳು ಮತ್ತು ಸಮುದಾಯ ಭಾಂಧವರು ಭಾಗವಹಿಸಿ ಕಾರ್ಯಕ್ರಮ ಯಶಶ್ವಿ ಗೊಳಿಸಬೇಕೆಂದು ಕೇರಳ ಮರಾಟಿ ಸಂರಕ್ಷಣಾ ಸಮಿತಿ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- Get link
- X
- Other Apps
Comments
Post a Comment