- Get link
- X
- Other Apps
ಫೋಟೋಗ್ರಾಫರ್ ನಿಂದ ಜೀವದಾನ ದಿಢೀರನೆ ಅಲ್ಲಿ ಧ್ವನಿ ಬರಲು ಶುರುವಾಯಿತು, ಮೃತ ದೇಹ ಮಾತಾಡಿತು ?? ಹೌದು ಇದು ಕೇರಳದಲ್ಲಿ ನಡೆದ ನೈಜ್ಯ ಘಟನೆ
- Get link
- X
- Other Apps
ಎರ್ನಾಕುಲಮ್:- ಕೇರಳದಲ್ಲಿಯ
ಎರ್ನಾಕುಲಮ್ ನಲ್ಲಿ ಒಬ್ಬ ಫೋಟೋಗ್ರಾಫರ್ ಪೊಲೀಸರ ಕಾಗದಪತ್ರದ ಸಲುವಾಗಿ ಒಂದು ಮೃ’ತದೇಹದ ಫೋಟೋ ತಗೆಯುತ್ತಿದ್ದನು. ಆದರೆ ಫೋಟೋ ತಗೆಯುವಾಗ ಒಂದು ವಿಚಿತ್ರ ಘಟನೆ ನಡೆದಿದೆ. ಫೋಟೋಗ್ರಾಫರ್ ಇನ್ನೇನು ಫೋಟೋ ತೆಗೆಯಲು ಅಣಿ ಯಾಗಬೇಕು ಎನ್ನುವಷ್ಟರಲ್ಲಿ ಆತನಿಗೆ ದಿಢೀರನೆ ಅಲ್ಲಿ ಧ್ವನಿ ಬರಲು ಶುರುವಾಯಿತು. ಆಗ ಆತನು ಮೃ’ತ ದೇಹದ ಹತ್ತಿರ ಹೋಗಿ ನೋಡಿದಾಗ ಆ ಧ್ವನಿ ಮೃ’ತ ವ್ಯಕ್ತಿಯ ಬಾಯಿಯಿಂದ ಬರುತ್ತಿದೆ ಎಂಬುದು ಗೊತ್ತಾಯಿತು. ಫೋಟೋಗ್ರಾಫರ್ ತಕ್ಷಣವೇ ಈ ಕುರಿತು ಪೊಲೀಸ್ ರಿಗೆ ತಿಳಿಸಿದನು. ಆನಂತರ ಈ ಮೃ’ತ ವ್ಯಕ್ತಿ ಇನ್ನು ಜೀವಂತವಿದ್ದಾನೆ ಎಂಬುದು ಗೊತ್ತಾಯಿತು.ಫೋಟೋಗ್ರಾಫರ್ ಟಾಮಿ ಥಾಮಸ್ ಇವರನ್ನು ಎರ್ನಾಕುಲಮ್ ಜಿಲ್ಲೆಯಲ್ಲಿಯ ಕಲಾಮಾಸರಿ ಪರಿಸರದಲ್ಲಿಯ ಅದಾತಾಲ್ ಪೊಲೀಸರು ಫೋಟೋ ತಗೆಯುವ ಸಲುವಾಗಿ ಕರೆದಿದ್ದರು. ಮೃ’ತ ಪಟ್ಟ ವ್ಯಕ್ತಿಯ ಹೆಸರು ಶಿವದಾಸನ್ ಇದೆ. ಶಿವದಾಸನ್ ಇವರ ಮೃ’ತ್ಯು ವಾಗಿದೆ ಎಂದು ತಿಳಿದು ಪೊಲೀಸರು ಅವರಿಗೆ ಸಂಬಂಧಪಟ್ಟ ಮೇಲೆ ಔಪಚಾರಿಕ ಕಾರ್ಯಗಳನ್ನು ಕೈಗೊಳ್ಳುವವರಿದ್ದರು. ಥಾಮಸ್ ಯಾವಾಗ ಆ ಮೃ’ತ ಶರೀರದ ಫೋಟೊ ತಗೆಯುವ ಸಲುವಾಗಿ ಸಮೀಪ ಹೋದಾಗ ಅವರಿಗೆ ಧ್ವನಿಯೊಂದನ್ನು ಕೇಳಿಬಂತು. ಥಾಮಸ್ ಅವರು ಅಲ್ಲಿದ್ದ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದರು. ಆಮೇಲೆ ಆತನ ಪರೀಕ್ಷಣೆ ಮಾಡಿದಾಗ ಅವನು ಇನ್ನು ಜೀವಂತವಾಗಿದ್ದಾನೆ ಎಂದು ತಿಳಿದು ಬಂದಿತು. ಸದ್ಯದಲ್ಲಿ ಶಿವದಾಸನ್ ಇವರಿಗೆ ತ್ರಿಶೂರದ ಜ್ಯುಬಿಲಿ ಮಿಷನ್ ಆಸ್ಪತ್ರೆಯಲ್ಲಿ ದಾಖಲೆ ಮಾಡಲಾಗಿದೆ.ಶಿವದಾಸನ್ ಪಾಲಕ್ಕಡ್ ನಲ್ಲಿಯ ಕಲಾಮಸರಿಹತ್ತಿರ ಬಾಡಿಗೆಯ ಮನೆಯಲ್ಲಿ ಒಬ್ಬನೆ ವಾಸವಾಗಿದ್ದನು. ರವಿವಾರ ಶಿವದಾಸನ್ ಅವರ ಮನೆಯಿಂದ ಜೋರಾಗಿ ನರಳುವ ಧ್ವನಿ ಬರುತ್ತಿತ್ತು. ಅಲ್ಲಿದ್ದ ಜನರು ಬಾಗಿಲು ತಗೆದು ನೋಡಿದರು. ಮುಂದೇ ಆತ ನಿಶ್ಚೇಷ್ಟಿತನಾಗಿ ಬಿದ್ದುದರಿಂದ ಶಿವದಾಸನ್ ಸ’ತ್ತೇ ಹೋದ ಎಂದು ತಿಳಿದು ಅವರು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದರು. ನಂತರ ಈ ಮೇಲಿನ ಘಟನೆ ಜರುಗಿತು.48 ರ ಪ್ರಾಯದ ಟಾಮಿ ಥಾಮಸ್ ಇವರು ಅಲ್ಲಿಯ ಸ್ಥಳೀಯ ಮಾಧ್ಯಮಗಳಿಗೆ ಹೇಳಿದ್ದಾರೆ, ” ಕಳೆದ 25 ವರ್ಷಗಳಿಂದ ಪೊಲೀಸ ವಿಭಾಗದಲ್ಲಿ ಇಂತಹ ಅನೇಕ ಫೋಟೋ ತಗೆಯುವ ಕಾರ್ಯ ಮಾಡುತ್ತಿದ್ದೇನೆ. ಈ ಶಿವದಾಸನ್ ಮನೆಗೆ ಹೋದಾಗ ಆತನು ಕೆಳಗೆ ಬಿದ್ದಿದ್ದನು ಹಾಗೆ ಅವನ ತಲೆಯಿಂದ ರ’ಕ್ತ ಬರುತ್ತಿತ್ತು. ತಲೆಗೆ ಪೆಟ್ಟಾಗಿದ್ದರಿಂದ ಆತನು ಜ್ಞಾನಹೀನನಾಗಿ ಬಿದ್ದಿದ್ದನು. ಥಾಮಸ್ ಮೃ’ತಶರೀರದ ಸಮೀಪ ಹೋದಾಗ ಅವರಿಗೆ ಒಂದು ಧ್ವನಿಯು ಕೇಳಿ ಬಂದಿತು. ಆಗ ಆ ಧ್ವನಿ ಶಿವದಾಸನ್ ಅವರದೇ ಇದೇಯಂದು ತಿಳಿದು ಬಂತು. ತದನಂತರ ಪೊಲೀಸರು ಶಿವದಾಸನ್ ಅವರಿಗೆ ಆಸ್ಪತ್ರೆಯಲ್ಲಿ ದಾಖಲೆ ಮಾಡಿದರು. ತೀವ್ರ ರಕ್ತದೊತ್ತಡದ ಕಾರಣದಿಂದಾಗಿ ಶಿವದಾಸನ್ ಅವರು ಕೆಳಗಡೆ ಬಿದ್ದಿದ್ದಾರೆ ಎಂದು ಅಲ್ಲಿಯ ವೈದ್ಯರು ತಿಳಿಸಿದ್ದಾರೆ.
- Get link
- X
- Other Apps
Comments
Post a Comment