- Get link
- X
- Other Apps
- Get link
- X
- Other Apps
ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ ಯಶಸ್ವಿ ದಿನ ಕೋವಿಡ್ 19 ಸೋಂಕು
ಒಂದು ಪ್ರಕರಣವೂ ವರದಿಯಾಗಿಲ್ಲ😀
---------------------------------------
ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ (ಏ.12)ಕೋವಿಡ್ 19 ನಿಯಂತ್ರಣದಲ್ಲಿ ಯಶಸ್ವಿ ದಿನ. ಭಾನುವಾರ
ಯಾರಿಗೂ ಕೋವಿಡ್ 19 ಸೋಂಕು ಖಚಿತವಾದುದು ವರದಿಯಾಗಿಲ್ಲ.
ಕಾಸರಗೋಡು ಜನರಲ್ ಸರಕಾರಿ ಆಸ್ಪತ್ರೆಯಲ್ಲಿ ಸೋಂಕು ಖಚಿತಗೊಂಡು ದಾಖಲಾಗಿದ್ದ 26 ಮಂದಿ
ಭಾನುವಾರ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ. ಕಣ್ಣೂರು ಸರಕಾರಿ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ
ಕಾಸರಗೋಡು ಜಿಲ್ಲೆಯ ನಿವಾಸಿಗಳಿಬ್ಬರ ಫಲಿತಾಂಶ ನೆಗೆಟಿವ್ ಆಗಿದೆ. ಈ ವರೆಗೆ ಜಿಲ್ಲೆಯಲ್ಲಿ ಕೋವಿಡ್ 19 ಖಚಿತಗೊಂಡಿದ್ದ 166
ಮಂದಿಯಲ್ಲಿ 61 ಮಂದಿ ಗುಣಮುಖರಾಗಿದ್ದಾರೆ. ದೇಶದಲ್ಲೇ ಪ್ರಥಮ ಬಾರಿಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಗುಣಮುಖರಾಗಿ ಯಾವ
ಆಸ್ಪತ್ರೆಯಿಂದಲೂ ಬಿಡುಗಡೆಗೊಂಡವರಿಲ್ಲ.
ಜಿಲ್ಲೆಯಲ್ಲಿ ಶೇ 37 ರಿಕವರಿ ರೇಟ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎ.ವಿ.ರಾಮದಾಸ್
ತಿಳಿಸಿದರು. ದೇಶದಲ್ಲಿ ಶೇ 11.4 ಆಗಿದ್ದು,ಅಮೆರಿಕದಲ್ಲಿ 5.7 ಆಗಿದೆ.
ರೋಗ ಬಾಧಿತರಲ್ಲಿ ಯಾರೂ ಮೃತಪಟ್ಟಿಲ್ಲ ಎಂಬುದೂ ಗಮನಾರ್ಹ. ಈ ಸಾಧನೆಗೆ ಸರ್ವ ಸಹಕಾರ
ನೀಡಿದ ವಿಶೇಷ ಅಧಿಕಾರಿ ಅಲ್ ಕೇಷ್ ಕುಮಾರ್ ಶರ್ಮ, ಜಿಲ್ಲಾಡಳಿತೆ, ಪೊಲೀಸ್ ದಳ, ವೈದ್ಯರು, ದಾದಿಯರು, ಆರೋಗ್ಯ
ಕಾರ್ಯಕರ್ತರು ಮತ್ತು ರಾಜ್ಯ ಸರಕಾರ- ಆರೋಗ್ಯ ಇಲಾಖೆ ತಿಳಿಸಿದ ಸಲಹೆ-ಸೂಚನೆಗಳನ್ನು ಪಾಲಿಸಿದ ಸಾರ್ವಜನಿಕರು
ಅಭಿನಂದನಾರ್ಹರು ಎಂದು ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.*ವೀಕ್ಷಿಸಿ Fox24liveನೊಂದಿಗೆ*👏🏻
*Please Watch, 👍🏼, Share➡ and Subscribe our Channel for more Informations..*
https://www.youtube.com/channel/UC64_0ua1E3W5hfgpfxkQupQ
*Fox24live* news channel
*ಹೆಚ್ಚಿನ ಸುದ್ದಿಗಳಿಗಾಗಿ ನಮ್ಮ ಚಾನಲ್ ಸಬ್ ಸ್ಕ್ರೈಬ್ ಮಾಡಿ 🔔ಬಟನ್ ಒತ್ತಿ*
*Fox24live*🦜 always with You👏🏻👏🏻💐
- Get link
- X
- Other Apps
Comments
Post a Comment