- Get link
- X
- Other Apps
ಬಡರೋಗಿಗಳಿಗೆ ಚಿಕಿತ್ಸೆ ದೊರೆಯುವಲ್ಲಿ ಮತ್ತು ಅವರ ಶೋಷಣೆ ತಡೆಗಟ್ಟುವಲ್ಲಿ ಮೋದಿ ಸರಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯವೆಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಅಡ್ವ. ಕೆ.ಶ್ರೀಕಾಂತ್
- Get link
- X
- Other Apps
ಬಡರೋಗಿಗಳಿಗೆ ಚಿಕಿತ್ಸೆ ದೊರೆಯುವಲ್ಲಿ ಮತ್ತು ಅವರ ಶೋಷಣೆ ತಡೆಗಟ್ಟುವಲ್ಲಿ ಮೋದಿ ಸರಕಾರ ಕೈಗೊಂಡಿರುವ ಕ್ರಮ ಶ್ಲಾಘನೀಯವೆಂದು ಬಿಜೆಪಿ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಅಡ್ವ. ಕೆ.ಶ್ರೀಕಾಂತ್ ಹೇಳಿದ್ದಾರೆ.ಕುಂಬ್ಳೆಯಲ್ಲಿ ಪ್ರಧಾನ ಮಂತ್ರಿ ಜನ್ ಔಷಧಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡುತ್ರಿದ್ದರು.
ದೇಶದ ಬಡ ರೋಗಿಗಳಿಗೆ ಚಿಕಿತ್ಸೆ ದೊರೆಯುವಂತೆ ಮಾಡಲು ಹಲವಾರು ಜನಪರ ಯೋಜನೆಗಳನ್ನು ಕೇಂದ್ರ ಸರಕಾರ ಕೈಗೊಂಡಿದ್ದು ಚಿಕಿತ್ಸಾ ಕ್ಷೇತ್ರದಲ್ಲಿ ಅದ್ಭುತ ಸಾಧನೆಯನ್ನು ಮಾಡುತ್ತಿದೆ. ರೋಗಿಗಳ ಶೋಷಣೆಯನ್ನು ತಡೆಗಟ್ಟಲು ಮೋದಿ ಸರಕಾರ ಕಠಿನ ಕ್ರಮ ಕೈಗೊಂಡಿದೆ. ಮಿತವಾದ ದರದಲ್ಲಿ ಉತ್ತಮ ಗುಣಮಟ್ಟದ ಮದ್ದುಗಳು ಜನ ಔಷಧಿ ಕೇಂದ್ರಗಳಲ್ಲಿ ಲಭಿಸುತ್ತಿದೆಯೆಂದೂ ಇದರ ಪ್ರಯೋಜನವನ್ನು ಜನರು ಪಡಕೊಳ್ಳಬೇಕೆಂದೂ ಶ್ರೀಕಾಂತ್ ಆಗ್ರಹಿಸಿದ್ದಾರೆ. ಜನ ಔಷಧ ಕೇಂದ್ರ ಬರೀ ವ್ಯಾಪಾರ ದೃಷ್ಟಿಯಿಂದ ಆರಂಭಿಸಲಾಗುತ್ತಿಲ್ಲ. ಬದಲಾಗಿ ಬಡಜನರ ಸೇವಾ ಕೇಂದ್ರವಾಗಿ ಕಾರ್ಯಾಚರಿಸುವಂತಹ ಕೇಂದ್ರವದುಯೆಂದು ಅವರು ಹೇಳಿದರು.
ಪ್ರಧಾನ ಮಂತ್ರಿ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಭಾರತದ ಸುಮಾರು 50 ಕೋಟಿ ಬಡವರಿಗೆ ಐದು ಲಕ್ಷ ರೂಪಾಯಿ ಉಚಿತ ಚಿಕಿತ್ಸೆ ದೊರೆಯುತಲಿದೆ. ಇದು ವಿಶ್ವದಲ್ಲೇ ಅತಿದೊಡ್ಡ ಯೋಜನೆಯಾಗಿ ಗುರುತಿಸಲ್ಪಟಿದೆಯೆಂದು ಶ್ರೀಕಾಂತ್ ತಿಳಿಸಿದರು. ಕೇಂದ್ರ ಸರಕಾರದ ಜನಪರ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಕೇರಳ ಸರಕಾರ ಮೀನಮೇಷ ಎಣಿಸುತ್ತಿದೆಯೆಂದು ಅವರು ಆಪಾದಿಸಿದರು.
- Get link
- X
- Other Apps
Comments
Post a Comment